Description
KEA ಪತ್ರಿಕೆ-1 ಹಿಂದಿನ ಪರೀಕ್ಷೆಗಳ ವಿವರಣಾತ್ಮಕ ಪ್ರಶೋತ್ತರ ಮಾಲಿಕೆ (ಭಾಗ-1 ಮತ್ತು ಭಾಗ-2) – ಪ್ರಣತಿ ಅಕಾಡೆಮಿ (SUKISH G.S) ಸುಕೀಶ್ ಜಿ.ಎಸ್ KEA ಪರೀಕ್ಷೆಗಳಲ್ಲಿ ಗರಿಷ್ಠ ಸ್ಕೋರ್ ಪಡೆಯಲು ಒಂದು ಅತ್ಯುತ್ತಮ ಕೈಪಿಡಿ! ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇತ್ತೀಚೆಗೆ ನಡೆಸಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ (ಪತ್ರಿಕೆ – 01) ಪ್ರಶ್ನೆ ಪತ್ರಿಕೆಗಳ ಸಂಪೂರ್ಣ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿರುವ “ಪ್ರಣತಿ ಪರ್ವ KEA ಪತ್ರಿಕೆ-1″ ಪುಸ್ತಕಗಳು . ಪಣತಿ ಪಬ್ಲಿಕೇಷನ್ ಹಾಗೂ ಸುಕೀಶ್ ಜಿ.ಎಸ್ (SUKISH G.S) ಅವರ ಮಾರ್ಗದರ್ಶನದಲ್ಲಿ ಮೂಡಿಬಂದಿದೆ.
- ಈ ಪುಸ್ತಕಗಳು (ಭಾಗ-1 ಮತ್ತು ಭಾಗ-2) ಮುಂಬರುವ KEA ಪರೀಕ್ಷೆಗಳಿಗೆ ಸಿದ್ಧರಾಗಲು ನಿಮಗೆ ಇರುವ ಅತ್ಯುತ್ತಮ ಸಂಪನ್ಮೂಲವಾಗಿದೆ.
- ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features) 360° ವಿವರಣೆ ಪ್ರತಿಯೊಂದು ಪ್ರಶ್ನೆಗೂ ಕೇವಲ ಉತ್ತರ ಮಾತ್ರವಲ್ಲದೆ, ಸುತ್ತಮುತ್ತಲಿನ ಸಮಗ್ರ ಮಾಹಿತಿಯೊಂದಿಗೆ 360 ಡಿಗ್ರಿ ವಿವರಣೆಯನ್ನು ನೀಡಲಾಗಿದೆ.
- ಈ ಪುಸ್ತಕದಲ್ಲಿ ಮಾನಸಿಕ ಸಾಮರ್ಥ್ಯ (Mental Ability) ಪ್ರಶ್ನೆಗಳನ್ನು ಸುಲಭ ಹಂತಗಳಲ್ಲಿ ಬಿಡಿಸಲಾಗಿದೆ.
- ಇತ್ತೀಚಿನ ಪ್ರಶ್ನೆ ಪತ್ರಿಕೆಗಳು 2026ರ ಮೇ ತಿಂಗಳಿನಲ್ಲಿ ನಡೆದ GROUP A and B (NHK & HK) ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೇರಿದಂತೆ, ತೀರಾ ಇತ್ತೀಚಿನ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಸೇರಿಸಲಾಗಿದೆ.
- ಯಾವ ಪರೀಕ್ಷೆಗಳಿಗೆ ಇದು ಉಪಯುಕ್ತ KEA PC | PSI | VAOSDA | FDA | PDOAE | JE | GROUP-C ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಅನುಕೂಲವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ.






