Description
ಅಪರಾಧ ನಿಯಂತ್ರಣ ಮತ್ತು ಪತ್ತೆಯಲ್ಲಿ ಪೊಲೀಸ್ ಶ್ವಾನಗಳ ಪಾತ್ರ ತುಂಬಾ ದೊಡ್ಡದಿದೆ. ದೈವದತ್ತವಾಗಿ ಶ್ವಾನಗಳಿಗೆ ಪ್ರಾಪ್ತವಾದ ಉತ್ತಮ ವಾಸನೆ ಗ್ರಹಿಕೆ ಸಾಮರ್ಥ್ಯ, ಚುರುಕುಮತಿ, ಧೈರ್ಯವಂತಿಕೆಯನ್ನು ಬಳಸಿಕೊಂಡ ಮಾನವ ಅವುಗಳನ್ನು ಪೊಲೀಸ್ ಕೆಲಸದಲ್ಲಿ ಸಹಾಯಕವಾಗಲಿ ಎಂಬ ಕಾರಣಕ್ಕೆ ಹಲವಾರು ಕಾರಕ್ಕೆ ತರಬೇತಿಗೊಳಿಸಿ ಬಳಸಿಕೊಳ್ಳತೊಡಗಿದೆ.
ಕರ್ನಾಟಕ ಪೊಲೀಸ್ ಶ್ವಾನದಳದ ಶ್ವಾನಗಳು ಅಪರಾಧ ಪತ್ತೆ ಮತ್ತು ಅಖಿಲ ಭಾರತ ಪೊಲೀಸ್ ಕರ್ತವ್ಯಕೂಟದಲ್ಲಿ ತೋರುವ ಅದ್ಭುತ ಪ್ರದರ್ಶನದಿಂದಾಗಿ ಇಡೀ ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದಿವೆ.
ಈ ಮುಂಚಿನಿಂದಲೂ ಶ್ವಾನದಳದಲ್ಲಿ ಹೊರಾಂಗಣ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ ಕೊಡುವ ಹಿನ್ನೆಲೆ ಒಳಾಂಗಣ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವ ಆಕರ ಗ್ರಂಥಗಳ ಕೊರತೆ ಇತ್ತು. ಇದರಿಂದಾಗಿ ಶ್ವಾನದಳಕ್ಕೆ ಬರುವ ಸಿಬ್ಬಂದಿಗಳು, ಅಧಿಕಾರಿಗಳು, ಹೊಸದಾಗಿ ನೇಮಕಗೊಂಡ ಸಬ್ಇನ್ಸ್ಪೆಕ್ಟರ್ಗಳು, ಪಿಸಿಗಳಿಗೆ ಪಾಠ ಮಾಡುವ ವೇಳೆ ಮಾಹಿತಿಯು ಕೊರತೆಯನ್ನು ಅನುಭವಿಸಬೇಕಾಗಿತ್ತು. ಅಲ್ಲದೇ ಆಸಕ್ತರಿಗೆ ವಿಷಯದ ಬಗ್ಗೆ ತಿಳಿಯಬೇಕೆಂಬ ಕುತೂಹಲವಿದ್ದರೂ ಆಕರಗಳ ಕೊರತೆಯಿಂದ ತುಂಬಾ ಸಮಸ್ಯೆ ಎನಿಸುತ್ತಿತ್ತು. ಹಾಗಾಗಿ ಹೊಸದಾಗಿ ನೇಮಕಗೊಂಡ ಪ್ರಶಿಕ್ಷಣಾರ್ಥಿಗಳ ಪಠ್ಯಕ್ರಮವನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ಪೂರಕವಾದ ಮಾಹಿತಿಯನ್ನು ಸೇರಿಸಿ ಅಧಿಕಾರಿಗಳು ಮತ್ತು ಹ್ಯಾಂಡ್ಲರ್ಗಳಿಗೆ ಉಪಯುಕ್ತವಾಗುವಂತೆ ಈ ಕೃತಿಯನ್ನು ರಚಿಸಿದ್ದಾರೆ.






