Dhronacharya Academy

ಸರಸ್ವತಿ ಸಮ್ಮಾನ್ ಪ್ರಶಸ್ತಿ-2024

ಸರಸ್ವತಿ ಸಮ್ಮಾನ್ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1991
ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನೀಡುವವರು – ಕೆ.ಕೆ ಬಿರ್ಲಾ ಫೌಂಡೆಷನ್
ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಮೊತ್ತ – 15 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿರುತ್ತದೆ.
ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳಿಗೆ ನೀಡಲಾಗುತ್ತದೆ.

ಪ್ರಥಮ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು –
1991ನೇ ಸಾಲಿನ ಪ್ರಥಮ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು – ಹಿಂದಿ ಕವಿ ಹರಿವಂಶ ರೈ ಬಚ್ಚನ್

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಮಹಿಳೆ –
1995ನೇ ಸಾಲಿನ 5ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು – ಮಲಯಾಳಂ ಸಾಹಿತಿ ಬಾಲಾಮಣಿ ಅಮ್ಮ (ಕವನ ಸಂಕಲನ – ನಿವೇದ್ಯಂ)

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡದ ಸಾಹಿತಿ –
ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡದ ಸಾಹಿತಿ – ಎಸ್.ಎಲ್ ಭೈರಪ್ಪ (ಮಂದ್ರಾ ಕಾದಂಬರಿಗೆ – 2010)

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ 2ನೇ ಕನ್ನಡದ ಸಾಹಿತಿ –
ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ 2ನೇ ಕನ್ನಡದ ಸಾಹಿತಿ – ಎಂ.ವೀರಪ್ಪ ಮೋಯಿಲಿ (ಶ್ರೀರಾಮಯಣ ಮಹಾನ್ವೇಷಣಂ – 2014)

31ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು –
2021ನೇ ಸಾಲಿನ 31ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು – ಹಿಂದಿ ಕವಿ ಪ್ರೊ|| ರಾಮ್‌ದರಸ್ ಮಿಶ್ರಾ (“ಮೈನ್ ತೊ ಯಹಾನ್ ಹೂನ್” ಕೃತಿ)

32ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು –
2022ನೇ ಸಾಲಿನ 32ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು – ತಮಿಳು ಸಾಹಿತಿ ಶಿವಶಂಕರಿ (ಪುಸ್ತಕ ಸೂರ್ಯವಂಶ)

33ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು –
2023ನೇ ಸಾಲಿನ 33ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು – ಮಲಯಾಳಂ ಸಾಹಿತಿ ಪ್ರಭಾವರ್ಮ (ಪುಸ್ತಕ ರೌದ್ರ ಸಾತ್ವಿಕಂ)

34ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು –
2024ನೇ ಸಾಲಿನ 34ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು – ಮಹಾಮಹೋಪಾಧ್ಯಾಯ ಭದ್ರೇಶ್‌ದಾಸ್ ಸ್ವಾಮಿ

ಮಹಾಮಹೋಪಾಧ್ಯಾಯ ಭದ್ರೇಶ್‌ದಾಸ್  ಸ್ವಾಮಿ –
ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಭದ್ರೇಶ್‌ದಾಸ್ ಸ್ವಾಮೀಜಿರವರ ಸ್ವಾಮಿನಾರಾಯಣ ಸಿದ್ಧಾಂತ ಸುಧಾ ಸಂಸ್ಕೃತ ಸಾಹಿತ್ಯ ಕೃತಿ 2024ನೇ ಸಾಲಿನ ಸರಸ್ವತಿ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾಗಿದೆ.