Union Budget 2025-2026ಕೇಂದ್ರದ ಬಜೆಟ್ - 2025-262025-26ರ ಕೇಂದ್ರದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರು ಲೋಕಸಭೆಯಲ್ಲಿ 2025 ಫೆಬ್ರವರಿ 1 ರಂದು ಮಂಡಿಸಿದರು. ಈ ಮೂಲಕ ನಿರ್ಮಲಾ ಸೀತಾರಾಮನ್ ರವರು ಸತತವಾಗಿ 8 ಬಾರಿ ಬಜೆಟ್ ಮಂಡಿಸಿರುವ ಕೇಂದ್ರದ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. (ಇಲ್ಲಿಯರೆಗೂ ನಿರ್ಮಲಾ ಸೀತಾರಾಮನ್ರವರು 7 ಪೂರ್ಣ ಪ್ರಮಾಣದ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ)2025-26ರ ಕೇಂದ್ರದ ಬಜೆಟ್ನಲ್ಲಿ ಗರೀಬ್ (ಬಡವರು), ಯೂತ್ (ಯುವಜನ), ಅನ್ನದಾತ (ರೈತರು), ನಾರಿ (ಮಹಿಳೆಯರು) ವರ್ಗಕ್ಕೆ ಆದ್ಯತೆ ನೀಡಲಾಗಿದೆ.(ನಿರ್ಮಲಾ ಸೀತಾರಾಮನ್ರವರು 2025-26ನೇ ಸಾಲಿನ ಆಯವ್ಯಯ ಪತ್ರವನ್ನು (ಕೇಂದ್ರ ಬಜೆಟ್) 77 ನಿಮಿಷಗಳ ಕಾಲ ಓದಿದರು. 2025-26ರ ಕೇಂದ್ರ ಬಜೆಟ್ನ ವಲಯವಾರು ವೆಚ್ಚಗಳು -ರಕ್ಷಣೆ -Defence2025-26ರ ಕೇಂದ್ರದ ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ₹ 4,91,732 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಗ್ರಾಮೀಣಾಭಿವೃದ್ಧಿ - Rural Development2025-26ರ ಕೇಂದ್ರದ ಬಜೆಟ್ನಲ್ಲಿ ಗ್ರಾಮೀಣಾಭಿವೃದ್ಧಿಗೆ ₹ 2,66,817 ಕೋಟಿ ಒದಗಿಸಲಾಗಿದೆ.ಗೃಹ ವ್ಯವಹಾರಗಳು - Home Affairs2025-26ರ ಕೇಂದ್ರದ ಬಜೆಟ್ನಲ್ಲಿ ಗೃಹ ವ್ಯವಹಾರಗಳಿಗೆ ₹ 2,33,211 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಕೃಷಿ ಮತ್ತು ಸಂಬಂಧಿತ ವಲಯ -Agriculture and Allied activities2025-26ರ ಕೇಂದ್ರದ ಬಜೆಟ್ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಕ್ಕೆ ₹ 1,71,437 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಶಿಕ್ಷಣ - Education2025-26ರ ಕೇಂದ್ರದ ಬಜೆಟ್ನಲ್ಲಿ ಶಿಕ್ಷಣಕ್ಕೆ ₹ 1,28,650 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಆರೋಗ್ಯ - Health2025-26ರ ಕೇಂದ್ರದ ಬಜೆಟ್ನಲ್ಲಿ ಆರೋಗ್ಯಕ್ಕೆ ₹ 98,311 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ನಗರಾಭಿವೃದ್ಧಿ - Urban Development2025-26ರ ಕೇಂದ್ರದ ಬಜೆಟ್ನಲ್ಲಿ ನಗರಾಭಿವೃದ್ಧಿಗೆ ₹ 96,777 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಐಟಿ ಮತ್ತು ಟೆಲಿಕಾಂ -IT and Telecom2025-26ರ ಕೇಂದ್ರದ ಬಜೆಟ್ನಲ್ಲಿ ಐಟಿ ಮತ್ತು ಟೆಲಿಕಾಂಗೆ ₹ 95,298 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಇಂಧನ - Energy2025-26ರ ಕೇಂದ್ರದ ಬಜೆಟ್ನಲ್ಲಿ ಇಂಧನಕ್ಕೆ ₹ 81,174 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ವಾಣಿಜ್ಯ ಮತ್ತು ಕೈಗಾರಿಕೆ - Commerce and Industry2025-26ರ ಕೇಂದ್ರದ ಬಜೆಟ್ನಲ್ಲಿ ವಾಣಿಜ್ಯ ಮತ್ತು ಕೈಗಾರಿಗೆ ₹ 65,553 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಸಮಾಜ ಕಲ್ಯಾಣ - Social Welfare2025-26ರ ಕೇಂದ್ರದ ಬಜೆಟ್ನಲ್ಲಿ ಸಮಾಜ ಕಲ್ಯಾಣಕ್ಕೆ ₹ 60,052 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ವೈಜ್ಞಾನಿಕ ಇಲಾಖೆ -Scientfic Department2025-26ರ ಕೇಂದ್ರದ ಬಜೆಟ್ನಲ್ಲಿ ವೈಜ್ಞಾನಿಕ ಇಲಾಖೆಗೆ ₹ 55,679 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಸಹಕಾರ ಸಚಿವಾಲಯ - 2025-26ರ ಕೇಂದ್ರದ ಬಜೆಟ್ನಲ್ಲಿ ಸಹಕಾರ ಸಚಿವಾಲಯಕ್ಕೆ ₹ 1,186.29 ಕೋಟಿ ಒದಗಿಸಲಾಗಿದೆ.ಡಿಆರ್ಡಿಒ ಅನುದಾನ ಹೆಚ್ಚಳ2025-26ರ ಕೇಂದ್ರದ ಬಜೆಟ್ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಸ್ಥೆಗೆ (ಡಿಆರ್ಡಿಒ) ₹ 26,816 ಕೋಟಿ ಒದಗಿಸಲಾಗಿದೆ. (ಕಳೆದ ಬಾರಿ ₹ 23,855 ಕೋಟಿ ನೀಡಲಾಗಿತ್ತು)ನರೇಗಾ ಯೋಜನೆ - 2025-26ನೇ ಕೇಂದ್ರದ ಬಜೆಟ್ನಲ್ಲಿ ನರೇಗಾ ಯೋಜನೆಗೆ ₹ 86,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. (2024-25ರ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್ನಲ್ಲಿ ನರೇಗಾ ಯೋಜನೆಗೆ ₹ 86,000 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು.)ತೆರಿಗೆ ಹೊಸ ಪದ್ಧತಿ ₹ 12 ಲಕ್ಷದವರೆಗೆ ವಿನಾಯಿತಿಆದಾಯ ತೆರಿಗೆ ಪ್ರಮಾಣ ವಿನಾಯಿತಿ₹ 4 ಲಕ್ಷ 0% - ತೆರಿಗೆ ಇಲ್ಲ₹ 4-8 ಲಕ್ಷ 5% - ತೆರಿಗೆ ವಿನಾಯಿತಿ₹ 8-12 ಲಕ್ಷ 10% - ತೆರಿಗೆ ವಿನಾಯಿತಿ₹ 12-16 ಲಕ್ಷ 15% - ತೆರಿಗೆ ಅನ್ವಯ₹ 16-20 ಲಕ್ಷ 20% - ತೆರಿಗೆ ಅನ್ವಯ₹ 20-24 ಲಕ್ಷ 25% - ತೆರಿಗೆ ಅನ್ವಯ₹ 24 ಲಕ್ಷ ಮೇಲ್ಪಟ್ಟ - ಆದಾಯ 30% ತೆರಿಗೆ ಅನ್ವಯಸ್ಟ್ಯಾಂಡರ್ಡ್ ಡಿಡಕ್ಷನ್ -2025-26ರ ಕೇಂದ್ರದ ಬಜೆಟ್ನಲ್ಲಿ ಮಾಸಿಕ ವೇತನ ಪಡೆಯುವ ಉದ್ಯೋಗಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತ ₹ 75,000 ಸೇರಿ ವಾರ್ಷಿಕ 12.75 ಲಕ್ಷ ರೂಪಾಯಿ ವಿನಾಯಿತಿ. ಪಿಂಚಣಿದಾರರ ಕುಟುಂಬ ಪಿಂಚಣಿಯಲ್ಲಿನ ಡಿಡಕ್ಷನ್ ಮೊತ್ತ ₹ 15,000 ದಿಂದ ₹ 25,000ಕ್ಕೆ ಹೆಚ್ಚಿಸಲಾಗಿದೆ.ನವೋದ್ಯಮ ಉತ್ತೇಜನಕ್ಕೆ ನಿಧಿದೇಶದ ನವೋದ್ಯಮಗಳನ್ನು ಉತ್ತೇಜಿಸಲು ₹ 10,000 ಕೋಟಿ ಮೊತ್ತದ ನೂತನ ನಿಧಿ ಯೋಜನೆ (FFS- Fund of Funds for Startups) ಯೋಜನೆಯನ್ನು ಪ್ರಕಟಿಸಲಾಗಿದೆ.ಪಿಎಂ ಸ್ವನಿಧಿ ಯೋಜನೆ ಪರಿಷ್ಕರಣೆಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಗೆ ಹೊಸ ರೂಪ ನೀಡುವ ಘೋಷಣೆ ಮಾಡಲಾಗಿದೆ. ಬ್ಯಾಂಕ್ಗಳು ಮತ್ತು ಯುಪಿಐ ಜತೆ ಲಿಂಕ್ ಆಗಿರುವ ಕ್ರೆಡಿಟ್ ಕಾರ್ಡ್ಗಳಿಂದ ₹ 30,000 ದ ವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ 68 ಲಕ್ಷ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.200 ವಂದೇ ಭಾರತ್ ರೈಲು ನಿರ್ಮಾಣ2025-26ರ ಕೇಂದ್ರ ಬಜೆಟ್ನಲ್ಲಿ ರೈಲ್ವೆಗೆ ₹ 2.52 ಲಕ್ಷ ಕೋಟಿ ಮೀಸಲು ಇಡಲಾಗಿದೆ. ಮುಂದಿನ 2-3 ವರ್ಷಗಳಲ್ಲಿ 200 ‘ವಂದೇ ಭಾರತ್’, 100 ‘ಅಮೃತ್ ಭಾರತ್’ ಮತ್ತು 50 ‘ನಮೋ ಭಾರತ್’ ರೈಲುಗಳನ್ನು ನಿರ್ಮಿಸುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ 17,500 ಹೊಸ ಬೋಗಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. (2025-26ರಲ್ಲಿ 2,000 ಬೋಗಿಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ)ಕರ್ನಾಟಕದ 15 ರೈಲ್ವೆ ಯೋಜನೆಗಳಿಗೆ 7,564 ಕೋಟಿ ರೂ. ಅನುದಾನ2028ರವರೆಗೆ ಜಲಜೀವನ್ ಮಿಷನ್ ವಿಸ್ತರಣೆಜಲಜೀವನ್ ಮಿಷನ್ ಯೋಜನೆಯಡಿ 2019ರಿಂದ ಭಾರತದ ಗ್ರಾಮೀಣ ಭಾಗದ 15 ಕೋಟಿ ಕುಟುಂಬಗಳಿಗೆ (ಶೇ. 80 ರಷ್ಟು) ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ ಎಂದು 2025-26ರ ಕೇಂದ್ರ ಬಜೆಟ್ನಲ್ಲಿ ವಿವರಿಸಲಾಗಿದೆ. ಈ ಯೋಜನೆಯಡಿ ಉಳಿದ ಮನೆಗಳಿಗೂ (ಶೇ. 100 ರಷ್ಟು) ನಲ್ಲಿ ಸಂಪರ್ಕ ನೀಡುವ ಸಲುವಾಗಿ ಈ ಯೋಜನೆಯನ್ನು 2028ರವರೆಗೆ ವಿಸ್ತರಿಸಲಾಗಿದೆ. ಜನ ಭಾಗೀರಥಿಯ ಮೂಲಕ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿ ಅದರ ನಿರ್ವಹಣೆ ಮಾಡುವ ಮೂಲಕ ಗುಣಮಟ್ಟದ ಮೂಲಸೌಕರ್ಯ ಒದಗಿಸಲಾಗುತ್ತದೆ. ಸುಸ್ಥಿರ ಮತ್ತು ಜನಕೇಂದ್ರಿತ ಸೇವೆ ಪೂರೈಕೆಗಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರತ್ಯೇಕ ಒಪ್ಪಂದಗಳನ್ನು (ಎಂಒಯು) ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.ಇ.ವಿ ಪ್ರಗತಿಗಾಗಿ ತೆರಿಗೆ ವಿನಾಯಿತಿಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಮುಖಿಯಾಗುವಂತೆ ಮಾಡುವ ಉದ್ದೇಶದಿಂದ ಇ.ವಿ ಬ್ಯಾಟರಿ ತಯಾರಿಸಲು ಅಗತ್ಯವಿರುವ ಮೂಲ ಪರಿಕರಗಳನ್ನು ಒದಗಿಸುತ್ತಿರುವ ಇನ್ನೂ 35 ಕಂಪನಿಗಳಿಗೆ ಹೆಚ್ಚುವರಿಯಾಗಿ ತೆರಿಗೆ ವಿನಾಯಿತಿಯನ್ನು 2025-26ರ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ದೇಶಿಯ ತಂತ್ರಜ್ಞಾನ ಅಭಿವೃದ್ಧಿ ಒತ್ತು ನೀಡಲು “ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್” ಪ್ರಾರಂಭಿಸಲು ಉದ್ದೇಶಿಸಲಾಗಿದೆ.ವಿಕಸಿತ ಭಾರತಕ್ಕಾಗಿ ಅಣುಶಕ್ತಿ ಯೋಜನೆಗೆ ₹ 20 ಸಾವಿರ ಕೋಟಿಇಂಧನ ಪರಿವರ್ತನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ₹ 20 ಸಾವಿರ ಕೋಟಿ ವೆಚ್ಚದ ಪರಮಾಣು ಶಕ್ತಿ ಯೋಜನೆಯನ್ನು 2025-26ರ ಬಜೆಟ್ನಲ್ಲಿ ಘೋಷಿಸಲಾಗಿದೆ. 2047ರ ವೇಳೆಗೆ ಕನಿಷ್ಠ 100 ಗಿಗಾ ವ್ಯಾಟ್ ಪರಮಾಣು ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಲು ಉದ್ದೇಶಿಸಲಾಗಿದೆ. ₹ 20 ಸಾವಿರ ಕೋಟಿ ವೆಚ್ಚದಲ್ಲಿ ಸಂಶೋಧನೆ ಮತ್ತು ಸಣ್ಣ ಮಾದರಿ ಪರಮಾಣು ಸ್ಥಾವರಗಳನ್ನು (SMRs -Small modular reactors) ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. 2033ರ ವೇಳೆಗೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕನಿಷ್ಠ 5 ಎಸ್ಎಂಆರ್ ಕಾರ್ಯಾರಂಭ ಮಾಡಲಿವೆ ಎಂದು ಹಣಕಾಸು ಸಚಿವರು ತಿಳಿಸಿದರು.ಸ್ವಚ್ಛ ಭಾರತಕ್ಕೆ ₹ 12,192 ಕೋಟಿಕೇಂದ್ರ ಸರ್ಕಾರದ ಮಹತ್ವದ ಸ್ವಚ್ಛ ಭಾರತ ಯೋಜನೆಗೆ ₹ 12,192 ಕೋಟಿ ಅನುದಾನ ನೀಡಲಾಗಿದೆ. ಹಂಚಿಕೆ ಮಾಡಲಾದ ಅನುದಾನವನ್ನು ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶ ಎಂದು ವಿಂಗಡಣೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದ ಸ್ವಚ್ಛ ಭಾರತ ಯೋಜನೆಗೆ ₹ 7,192 ಕೋಟಿ ಮತ್ತು ನಗರ ಕೇಂದ್ರಿತ ಯೋಜನೆಗೆ ₹ 5,000 ಕೋಟಿ ಹಂಚಿಕೆ ಮಾಡಲಾಗಿದೆ. (ದೇಶವನ್ನು ಬಯಲು ಶೌಚಾಲಯ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ 2014 ಅಕ್ಟೋಬರ್ 2ರಂದು ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಗೆ ಚಾಲನೆ ನೀಡಿತ್ತು)ಬಾಡಿಗೆ ಆದಾಯದ ಮೇಲೆ ಟಿಡಿಎಸ್ ಮಿತಿ 6 ಲಕ್ಷ ರೂಪಾಯಿಗೆ ಏರಿಕೆ ಬಾಡಿಗೆ ಮನೆಯಿಂದ ಬರುವ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಮಿತಿ 2.5 ಲಕ್ಷ ರೂ. ನಿಂದ 6 ಲಕ್ಷ ರೂ.ಗೆ ಏರಿಕೆಗಿಗ್ ಕಾರ್ಮಿಕರಿಗೆ ಭದ್ರತೆಇ-ಕಾಮರ್ಸ್ ಕ್ಷೇತ್ರದಲ್ಲಿ ತೊಡಗಿರುವ ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನು 2025-26ರ ಬಜೆಟ್ನಲ್ಲಿ ಘೋಷಿಸಲಾಗಿದೆ.ಈ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವುದು ಮತ್ತು ಇ-ಶ್ರಮ್ ಪೋರ್ಟಲ್ನಲ್ಲಿಅವರ ನೋಂದಣಿಗೂ ಕ್ರಮ ಕೈಗೊಳ್ಳಲಾಗುವುದು. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ಇವರಿಗೆ ಆರೋಗ್ಯ ಸೌಲಭ್ಯ ಒದಗಿಸಲಾಗುವುದು ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರವರು ತಿಳಿಸಿದರು. (ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ನೋಂದಣಿಗಾಗಿ ಇ-ಶ್ರಮ್ ಪೋರ್ಟಲ್ ಅನ್ನು 2021ರ ಆಗಸ್ಟ್ನಲ್ಲಿ ಆರಂಭಿಸಲಾಗಿತ್ತು. 2025ರ ಜನವರಿ 27ರವರೆಗೆ 30.58 ಕೋಟಿ ಕಾರ್ಮಿಕರು ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ)ಗ್ರಾಮೀಣ ಕ್ರೆಡಿಟ್ ಸ್ಕೋರ್ಸ್ವಸಹಾಯ ಗುಂಪುಗಳು ಹಾಗೂ ಗ್ರಾಮೀಣ ಭಾಗದ ಜನರು ಸಾಲ ಪಡೆಯುವುದಕ್ಕೆ ಅನುಕೂಲವಾಗಲು ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಮೀಣ ಕ್ರೆಡಿಟ್ ಸ್ಕೋರ್ಗೆ ಸಂಬಂಧಿಸಿ ಚೌಕಟ್ಟು ರೂಪಿಸಲಿವೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರವರು ತಿಳಿಸಿದರು.ಕ್ಯಾನ್ಸರ್ ಸೇರಿ 36 ಔಷಧಕ್ಕೆ ಸುಂಕ ವಿನಾಯಿತಿ2025-26ರಲ್ಲಿ 200 ಕ್ಯಾನ್ಸರ್ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.ರಾಜ್ಯಗಳಿಗೆ ತೆರಿಗೆ ಹಂಚಿಕೆ (2025-26ನೇ ಸಾಲಿನಲ್ಲಿ ಅನುದಾನ ಪಡೆದ ರಾಜ್ಯಗಳು)ರಾಜ್ಯಗಳು ಹಂಚಿಕೆಯಾದ ತೆರಿಗೆ ಉತ್ತರ ಪ್ರದೇಶ ₹ 2,55,172.21 ಕೋಟಿ ರೂ.ಬಿಹಾರ ₹ 1,43,069.04 ಕೋಟಿ ರೂ.ಮಧ್ಯಪ್ರದೇಶ ₹ 1,11,661.87 ಕೋಟಿ ರೂ.ಮಹಾರಾಷ್ಟ್ರ ₹ 89,855.80 ಕೋಟಿ ರೂ.ರಾಜಸ್ಥಾನ ₹ 85,716.48 ಕೋಟಿ ರೂ.ಕರ್ನಾಟಕ ₹ 51,876.54 ಕೋಟಿ ರೂ.ವಿಶೇಷವಾಗಿ ಗಮನಿಸಿ2025-26ನೇ ಸಾಲಿನಲ್ಲಿ ₹ 51,876.54 ಕೋಟಿ ರೂ. ತೆರಿಗೆ ಪಾಲು ರಾಜ್ಯಕ್ಕೆ ಬರಲಿದೆ. 2024-25ನೇ ಸಾಲಿಗೆ ಹೋಲಿಸಿದ್ದಲ್ಲಿ ಶೇ.10 ರಷ್ಟು ಹೆಚ್ಚಳವಾದಂತಾಗಲಿದೆ.ಬಿಹಾರದಲ್ಲಿ ಆಹಾರ ತಂತ್ರಜ್ಞಾನ ಕೇಂದ್ರ2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಬಿಹಾರ ರಾಜ್ಯದಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.ತಾವರೆ ಬೀಜ(ಮಖಾನಾ) ಮಂಡಳಿ - ಬಿಹಾರ2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಆಹಾರ ಉತ್ಪನ್ನವಾಗಿ ಬಳಸುವ ತಾವರೆ ಬೀಜ (ಫಾಕ್ಸ್ ನಟ್) ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಸುಧಾರಿಸಲು ತಾವರೆ ಬೀಜ (ಮಖಾನಾ) ಮಂಡಳಿಯನ್ನು ಬಿಹಾರ ರಾಜ್ಯದಲ್ಲಿ ಸ್ಥಾಪಿಸಲಾಗುತ್ತದೆ. ಈ ಮಂಡಳಿಯ ಮೂಲಕ ತಾವರೆ ಬೀಜ ಉತ್ಪಾದಿತ ರೈತರಿಗೆ ತರಬೇತಿ ನೀಡಲಾಗುತ್ತದೆ. ಹಾಗೆಯೇ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಹಕಾರಿಯಾಗುತ್ತದೆ.ಕಿಸಾನ್ ಕ್ರೆಡಿಟ್ ಮಿತಿ ಹೆಚ್ಚಳ2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೃಷಿಕರಿಗೆ ವರದಾನವಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ವಿತರಿಸುವ ಸಬ್ಸಿಡಿ ಆಧಾರಿತ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ.ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯನ್ನು ಕಡಿಮೆ ಪ್ರಮಾಣದ ಬೆಳೆ ಇಳುವರಿ ಹೊಂದಿರುವ 100 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿಗೆ ತರಲಿರುವ ಈ ಯೋಜನೆಯನ್ನು ಒಟ್ಟು ₹ 1.7 ಕೋಟಿ ಅನ್ನದಾತರಿಗೆ ತಲುಪಿಸುವ ಗುರಿ ಹೊಂದಿದ್ದು, ಕೃಷಿ ಉತ್ಪಾದನೆ ಹೆಚ್ಚಳ, ಬೆಳೆ ವೈವಿಧ್ಯತೆ ಹಾಗೂ ಕೊಯ್ಲು ನಂತರದ ಮೂಲಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ.ಅಸ್ಸಾಂನಲ್ಲಿ ಯೂರಿಯಾ ಸ್ಥಾವರ 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಯೂರಿಯಾ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಅಸ್ಸಾಂನ ನಮೃಪ್ನಲ್ಲಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರ ಸ್ಥಾಪಿಸಲು ಉದ್ದೇಶಿಸಲಾಗಿದೆ.ಜೀನ್ ಬ್ಯಾಂಕ್ ಸ್ಥಾಪನೆ 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಆಹಾರ ಮತ್ತು ಪೋಷಕಾಂಶ ಭದ್ರತೆಗಾಗಿ 10 ಲಕ್ಷ ಜೀನ್ ಪ್ಲಾಸ್ಮ ಲೈನ್ ಹೊಂದಿರುವ 2ನೇ ಜೀನ್ ಬ್ಯಾಂಕ್ ಸ್ಥಾಪಿಸಲು ಘೋಷಿಸಲಾಗಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಗೆ ಜೆನೆಟಿಕ್ ಸಂಪನ್ಮೂಲಗಳ ಸಂರಕ್ಷಣೆಗೆ ಉತ್ತೇಜನ ನೀಡಲಿದೆ.ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಶೇ. 100ಕ್ಕೆ ಹೆಚ್ಚಳ ವಿಮಾ ಸೌಲಭ್ಯಗಳು ಹೆಚ್ಚೆಚ್ಚು ಜನರನ್ನು ತಲುಪುವ ಜತೆಗೆ ಉದ್ಯೋಗ ಸೃಷ್ಟಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಿಮಾ ವಲಯದಲ್ಲಿನ ನೇರ ವಿದೇಶಿ ಹೂಡಿಕೆ (ಎಫ್ಡಿಐ) ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಲಾಗಿದೆ.ಎನ್ಪಿಎಸ್ ವಾತ್ಸಲ್ಯ ಯೋಜನೆ ಚಂದಾಕ್ಕೆ ತೆರಿಗೆ ವಿನಾಯಿತಿ ಎನ್ಪಿಎಸ್ ವಾತ್ಸಲ್ಯ ಯೋಜನೆಯನ್ನು ಇನ್ನಷ್ಟು ಆಕರ್ಷಕಗೊಳಿಸುವ ಉದ್ದೇಶದಿಂದ ಈ ಯೋಜನೆಯಡಿ ಮಾಡುವ ವಾರ್ಷಿಕ 50,000 ರೂಪಾಯಿ ಚಂದಾ ಕೊಡುಗೆಗೆ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು 2025-26ರ ಕೇಂದ್ರದ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. (ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಮುಂದುವರಿಯುವವರಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ)ಎನ್ಪಿಎಸ್ ವಾತ್ಸಲ್ಯ 2024-25ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಯೋಜನೆಯಾಗಿದೆ. ಇದು ಅಪ್ರಾಪ್ತರ ಖಾತೆಗಳಿಗೆ ಹೆತ್ತವರು ಮತ್ತು ಪೋಷಕರು ಕೊಡುಗೆ ನೀಡುವ ಈ ಯೋಜನೆಯನ್ನು 2024 ಸೆಪ್ಟೆಂಬರ್ 18ರಂದು ಆರಂಭಿಸಲಾಗಿತ್ತು.120 ಕಡೆ ಉಡಾನ್ ಭಾಗ್ಯ ದೇಶದ ವಾಯುಯಾನ ಜಾಲವನ್ನು ಇನ್ನಷ್ಟು ವಿಸ್ತರಿಸುವುದು ಮತ್ತು ಹೆಚ್ಚೆಚ್ಚು ಜನರು ವಿಮಾನ ಯಾನ ಸೇವೆ ಬಳಸಬೇಕೆಂಬ ಉದ್ದೇಶದಿಂದ ಉಡಾನ್ ಯೋಜನೆಯನ್ನು 120 ಸ್ಥಳಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. (ಉಡಾನ್ ಯೋಜನೆ 2016ರಲ್ಲಿ ಆರಂಭವಾಗಿದೆ)5 ವರ್ಷದಲ್ಲಿ 75 ಸಾವಿರ ವೈದ್ಯಕೀಯ ಸೀಟ್ ವೈದ್ಯಕೀಯ ಶಿಕ್ಷಣ ಉತ್ತೇಜಿಸಲು ಮುಂದಿನ 5 ವರ್ಷದಲ್ಲಿ 75 ಸಾವಿರ ವೈದ್ಯಕೀಯ ಸೀಟ್ಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.