Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಲೇಖಕರಾದ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ UGC KSET |NET |JRF | Ph.D ಎಂಬ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು KSET, NET, JRF ಮತ್ತು Ph.D ಪ್ರವೇಶ ಪರೀಕ್ಷೆಗಳ ಸಾಮಾನ್ಯ ಪತ್ರಿಕೆ-1 (Paper 1) ಕ್ಕೆ ಉಪಯುಕ್ತವಾಗುತ್ತದೆ.
ವಿಶೇಷವಾಗಿ ಈ ಪುಸ್ತಕವು MA, M.Sc, M.Com, M.CA, M.BA ಸಾಮಾನ್ಯ ಪ್ರವೇಶಕ್ಕಾಗಿ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗಾಗಿ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ.
* ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):
- ನವೀಕೃತ ಪಠ್ಯಕ್ರಮ (Updated Syllabus Based) UGC ಯ ಇತ್ತೀಚಿನ ಮತ್ತು ಪರಿಷ್ಕೃತ ಪಠ್ಯಕ್ರಮಕ್ಕೆ ಅನುಗುಣವಾಗಿ ಈ ಪುಸ್ತಕವನ್ನು ವಿನ್ಯಾಸಗೊಳಿಸಲಾಗಿದೆ.
- ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು 2011 ರಿಂದ 2025 ರವರೆಗಿನ KSET ಪರೀಕ್ಷೆಯ ವಿವರಣಾತ್ಮಕ ಪ್ರಶ್ನೆ ಪತ್ರಿಕೆಗಳನ್ನು (Solved Papers) ಒಳಗೊಂಡಿದೆ.
- NET ಪರೀಕ್ಷೆಯ ಪ್ರಶೋತ್ತರಗಳು 2004 ರಿಂದ 2025 ರವರೆಗಿನ NET ಪರೀಕ್ಷೆಯಲ್ಲಿನ ಆಯ್ದ ಪ್ರಮುಖ ಪ್ರಶೋತ್ತರಗಳ ಸಂಗ್ರಹ ಮಾಡಲಾಗಿದೆ.
- ಸರಳ ಮತ್ತು ಸ್ಪಷ್ಟ ವಿಶ್ಲೇಷಣೆ ಪ್ರತಿಯೊಂದು ಪ್ರಶ್ನೆಗೂ ಅತ್ಯಂತ ಸರಳ ಹಾಗೂ ಸುಲಭವಾಗಿ ಅರ್ಥವಾಗುವಂತೆ ನೀಡಲಾಗಿದೆ.






