Description
ಸ್ಪರ್ಧಾರ್ಥಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದರೆ ಮಾನವಿಕ ಶಾಸ್ತ್ರಗಳನ್ನು ಅಭ್ಯಸಿಸುವುದು ಕಡ್ಡಾಯವಾಗಿದೆ. ಇದರಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ PDO ಪಂಚಾಯತ್ ಗ್ರೇಡ್-1 ಮತ್ತು ಗ್ರೇಡ್-2 ಇದರಿಂದ ಹೊರತಾಗಿಲ್ಲ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರಲಿ ಅದರಲ್ಲಿ ಇತಿಹಾಸ, ಭೂಗೋಳಶಾಸ್ತ್ರ, ಭಾರತದ ಸಂವಿಧಾನ, ಅರ್ಥಶಾಸ್ತ್ರ ಹಾಗೂ ವಿಜ್ಞಾನ ಇವುಗಳು ಕಡ್ಡಾಯ ವಿಷಯಗಳಾಗಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಕೇವಲ ನಾವು ಒಂದು ಉದ್ಯೋಗ ಪಡೆಯುವುದಕ್ಕೆ ಮಾತ್ರ ಸೀಮಿತವಲ್ಲ, ಇದರಿಂದ ನಾವು ದಿನ ನಿತ್ಯದ ವಿಚಾರಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಗತಕಾಲದ ಇತಿಹಾಸವನ್ನು ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಅರ್ಥಮಾಡಿಸುವುದು. ಈ ಕೃತಿಯಲ್ಲಿ ಬರುವ ಸಾಮಾನ್ಯ ಅಧ್ಯಯನವು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಉಪಯುಕ್ತವಾಗಿದೆ.