Tiger Reserves in India – 57

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್‌ರವರು ಛತ್ತೀಸ್‌ಗಢ ರಾಜ್ಯದ ಗುರು ಘಾಸಿದಾಸ್-ತಮೋರ್ ಪಿಂಗ್ಲಾ ಹುಲಿ ಸಂರಕ್ಷಿತ ಪ್ರದೇಶವನ್ನು ಭಾರತದ 56ನೇ ಹುಲಿ ಸಂರಕ್ಷಿತ ಪ್ರದೇಶವಾಗಿ 2024 ನವೆಂಬರ್ 18 ರಂದು ಅಧಿಸೂಚಿಸಿರುವುದಾಗಿ ತಿಳಿಸಿದರು.
ಗುರು ಘಾಸಿದಾಸ್-ತಮೋರ್ ಪಿಂಗ್ಲಾ ಹುಲಿ ಸಂರಕ್ಷಿತ ಪ್ರದೇಶ ಛತ್ತೀಸ್‌ಗಢ ರಾಜ್ಯದ 4ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

ಭಾರತದ 3ನೇ ದೊಡ್ಡ ಹುಲಿ ಸಂರಕ್ಷಿತ ಪ್ರದೇಶ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಸಲಹೆಯ ಮೇರೆಗೆ ಛತ್ತೀಸ್‌ಗಢ ಸರ್ಕಾರವು ಗುರು ಘಾಸಿದಾಸ್ – ತಮೋರ್ ಪಿಂಗ್ಲಾ ಹುಲಿ ಸಂರಕ್ಷಿತ ಪ್ರದೇಶವನ್ನು ಮನೇಂದ್ರಗಢ-ಚಿರ್ಮಿರಿ-ಭರತ್‌ಪುರ್, ಕೊರಿಯಾ, ಸೂರಜ್‌ಪುರ ಮತ್ತು ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಗಳಾದ್ಯಂತ ಸೂಚಿಸಿದೆ. ಹುಲಿ ಸಂರಕ್ಷಿತ ಪ್ರದೇಶವು ಒಟ್ಟು 2829.38 ಚ.ಕಿ.ಮೀ.ಗಳಷ್ಟು ವಿಸ್ತೀರ್ಣವನ್ನು ಒಳಗೊಂಡಿದೆ, 2049.2 ಚ.ಕಿ.ಮೀ.ಗಳಷ್ಟು ಪ್ರಮುಖ/ ನಿರ್ಣಾಯಕ ಹುಲಿ ಆವಾಸಸ್ಥಾನವನ್ನು ಒಳಗೊಂಡಿದೆ , ಇದು ಗುರು ಘಾಸಿದಾಸ್ ರಾಷ್ಟ್ರೀಯ ಉದ್ಯಾನವನ ಮತ್ತು ತಮೋರ್ ಪಿಂಗ್ಲಾ ವನ್ಯಜೀವಿ ಅಭಯಾರಣ್ಯವನ್ನು ಒಳಗೊಂಡಿರುತ್ತದೆ ಮತ್ತು 15 ಚ.ಕಿ.ಮೀ.ಗಳಷ್ಟು ಬಫರ್ ಅನ್ನು ಹೊಂದಿದೆ. ಇದು ಆಂಧ್ರಪ್ರದೇಶ ರಾಜ್ಯದ ನಾಗಾರ್ಜುನಸಾಗರ್-ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶ ಮತ್ತು ಅಸ್ಸಾಂ ರಾಜ್ಯದ ಮಾನಸ ಹುಲಿ ಸಂರಕ್ಷಿತ ಪ್ರದೇಶದ ನಂತರ ಇದು ಭಾರತದ ಮೂರನೇ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

ಭಾರತದ 57ನೇ ಹುಲಿ ಸಂರಕ್ಷಿತ ಪ್ರದೇಶ -ರತಪಾನಿ ಹುಲಿ ಸಂರಕ್ಷಿತ ಪ್ರದೇಶ – ಮಧ್ಯಪ್ರದೇಶ

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್‌ರವರು ಮಧ್ಯಪ್ರದೇಶ ರಾಜ್ಯದ ರತಪಾನಿ ಹುಲಿ ಸಂರಕ್ಷಿತ ಪ್ರದೇಶವನ್ನು ಭಾರತದ 57ನೇ ಹುಲಿ ಸಂರಕ್ಷಿತ ಪ್ರದೇಶವಾಗಿ 2024 ಡಿಸೆಂಬರ್ 3ರಂದು ಅಧಿಸೂಚಿಸಿರುವುದಾಗಿ ತಿಳಿಸಿದರು.
ರತಪಾನಿ ಹುಲಿ ಸಂರಕ್ಷಿತ ಪ್ರದೇಶವು 763.8 ಚದರ ಕಿಮೀ, ಬಫರ್ ಪ್ರದೇಶ 507.6 ಚದರ ಕಿಮೀ ಮತ್ತು ಒಟ್ಟು 1271.4 ಚದರ ಕಿಮೀ ಪ್ರದೇಶವನ್ನು ಹೊಂದಿದೆ. ಇದು ಮಧ್ಯಪ್ರದೇಶದ 8ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

ಭಾರತದ ಹುಲಿ ಸಂರಕ್ಷಿತ ಪ್ರದೇಶಗಳು – 57

1. ಬಂಡೀಪುರ ಹುಲಿ ಸಂರಕ್ಷಿತ ತಾಣ (1973-74)  – ಕರ್ನಾಟಕ (ಚಾಮರಾಜನಗರ ಜಿಲ್ಲೆ)
2. ಕಾರ್ಬೆಟ್ ಹುಲಿ ಸಂರಕ್ಷಿತ ತಾಣ (1973-74)  – ಉತ್ತರಾಖಂಡ್
3. ಕನ್ಹಾ ಹುಲಿ ಸಂರಕ್ಷಿತ ತಾಣ (1973-74)  – ಮಧ್ಯಪ್ರದೇಶ
4. ಮಾನಸ ಹುಲಿ ಸಂರಕ್ಷಿತ ತಾಣ (1973-74) – ಅಸ್ಸಾಂ
5. ಮೆಲ್ಘಾಟ್ ಹುಲಿ ಸಂರಕ್ಷಿತ ತಾಣ (1973-74)  – ಮಹಾರಾಷ್ಟ್ರ
6. ಪಲಮೌ ಹುಲಿ ಸಂರಕ್ಷಿತ ತಾಣ (1973-74) – ಜಾರ್ಖಂಡ್
7. ರಣಥಂಬೋರ್ ಹುಲಿ ಸಂರಕ್ಷಿತ ತಾಣ(1973-74) –  ರಾಜಸ್ಥಾನ
8. ಸಿಮ್ಲಿಪಾಲ್ ಹುಲಿ ಸಂರಕ್ಷಿತ ತಾಣ (1973-74) –  ಒಡಿಶಾ
9. ಸುಂದರಬನ್ಸ್ ಹುಲಿ ಸಂರಕ್ಷಿತ ತಾಣ (1973-74)  – ಪಶ್ಚಿಮ ಬಂಗಾಳ
10. ಪೆರಿಯಾರ್ ಹುಲಿ ಸಂರಕ್ಷಿತ ತಾಣ (1978-79)  – ಕೇರಳ
11. ಸರಿಸ್ಕಾ ಹುಲಿ ಸಂರಕ್ಷಿತ ತಾಣ (1978-79) –  ರಾಜಸ್ಥಾನ
12. ಬಕ್ಸಾ ಹುಲಿ ಸಂರಕ್ಷಿತ ತಾಣ (1982-83)  – ಪಶ್ಚಿಮ ಬಂಗಾಳ
13. ಇಂದ್ರಾವತಿ ಹುಲಿ ಸಂರಕ್ಷಿತ ತಾಣ (1982-83)  – ಛತ್ತೀಸ್‌ಗಢ
14. ನಮದಪ ಹುಲಿ ಸಂರಕ್ಷಿತ ತಾಣ (1982-83)  – ಅರುಣಾಚಲ ಪ್ರದೇಶ
15. ದುಧ್ವಾ ಹುಲಿ ಸಂರಕ್ಷಿತ ತಾಣ  (1987-88)  – ಉತ್ತರಪ್ರದೇಶ
16. ಕಲಕಾಡ್-ಮುಂಡನ್‌ತುರೈ ಹುಲಿ ಸಂರಕ್ಷಿತ ತಾಣ (1988-89)  – ತಮಿಳುನಾಡು
17. ವಾಲ್ಮೀಕಿ ಹುಲಿ ಸಂರಕ್ಷಿತ ತಾಣ (1989-90) –  ಬಿಹಾರ
18. ಪೆಂಚ್ ಹುಲಿ ಸಂರಕ್ಷಿತ ತಾಣ (1992-93)  – ಮಧ್ಯಪ್ರದೇಶ
19. ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ತಾಣ (1993-94)  – ಮಹಾರಾಷ್ಟ್ರ
20. ಬಾಂಧವಗಢ ಹುಲಿ ಸಂರಕ್ಷಿತ ತಾಣ (1993-94)  – ಮಧ್ಯಪ್ರದೇಶ
21. ಪನ್ನಾ ಹುಲಿ ಸಂರಕ್ಷಿತ ತಾಣ (1994-95)  – ಮಧ್ಯಪ್ರದೇಶ
22. ಡಂಪಾ ಹುಲಿ ಸಂರಕ್ಷಿತ ತಾಣ (1994-95)  – ಮಿಜೋರಾಂ
23. ಭದ್ರಾ ಹುಲಿ ಸಂರಕ್ಷಿತ ತಾಣ (1998-99)  – ಕರ್ನಾಟಕ (ಚಿಕ್ಕಮಗಳೂರು ಜಿಲ್ಲೆ)
24. ಪೆಂಚ್ ಹುಲಿ ಸಂರಕ್ಷಿತ ತಾಣ (1998-99)  – ಮಹಾರಾಷ್ಟ್ರ
25. ಪಕ್ಕೆ ಹುಲಿ ಸಂರಕ್ಷಿತ ತಾಣ (1999-2000)  – ಅರುಣಾಚಲ ಪ್ರದೇಶ
26. ನಮೇರಿ ಹುಲಿ ಸಂರಕ್ಷಿತ ತಾಣ (1999-2000)  – ಅಸ್ಸಾಂ
27. ಸಾತ್ಪುರ ಹುಲಿ ಸಂರಕ್ಷಿತ ತಾಣ (1999-2000)  – ಮಧ್ಯಪ್ರದೇಶ
28. ಅಣ್ಣಮಲೈ ಹುಲಿ ಸಂರಕ್ಷಿತ ತಾಣ (2008-09)  – ತಮಿಳುನಾಡು
29. ಸೀತಾನದಿ ಹುಲಿ ಸಂರಕ್ಷಿತ ತಾಣ (2008-09)  – ಛತ್ತೀಸ್‌ಗಢ
30. ಸತ್ಕೋಸಿಯಾ ಹುಲಿ ಸಂರಕ್ಷಿತ ತಾಣ (2008-09) – ಒಡಿಶಾ
31. ಕಾಜಿರಂಗ ಹುಲಿ ಸಂರಕ್ಷಿತ ತಾಣ (2008-09)  – ಅಸ್ಸಾಂ
32. ಅಚಾನಕ್ಮಾರ್ ಹುಲಿ ಸಂರಕ್ಷಿತ ತಾಣ (2008-09) –  ಛತ್ತೀಸ್‌ಗಢ
33. ದಾಂಡೇಲಿ-ಅಂಶಿ ಹುಲಿ ಸಂರಕ್ಷಿತ ಪ್ರದೇಶ (ಕಾಳಿ) (2008-09)  – ಕರ್ನಾಟಕ (ಉತ್ತರ ಕನ್ನಡ ಜಿಲ್ಲೆ)
34. ಸಂಜಯ್ ಹುಲಿ ಸಂರಕ್ಷಿತ ತಾಣ (2008-09)  – ಮಧ್ಯಪ್ರದೇಶ
35. ಮಧುಮಲೈ ಹುಲಿ ಸಂರಕ್ಷಿತ ತಾಣ (2007)  – ತಮಿಳುನಾಡು
36. ನಾಗರಹೊಳೆ ಹುಲಿ ಸಂರಕ್ಷಿತ ತಾಣ (2008-09)  – ಕರ್ನಾಟಕ (ಕೊಡಗು, ಮೈಸೂರು ಜಿಲ್ಲೆ)
37. ಪರಂಬಿಕುಲಂ ಹುಲಿ ಸಂರಕ್ಷಿತ ತಾಣ (2008-09)  – ಕೇರಳ
38. ಸಹ್ಯಾದ್ರಿ ಹುಲಿ ಸಂರಕ್ಷಿತ ತಾಣ (2009-10) – ಮಹಾರಾಷ್ಟ್ರ
39. ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ತಾಣ (2010-11)  – ಕರ್ನಾಟಕ (ಚಾಮರಾಜನಗರ ಜಿಲ್ಲೆ)
40. ಕಾವಲ್ ಹುಲಿ ಸಂರಕ್ಷಿತ ತಾಣ (2012-13)  – ತೆಲಂಗಾಣ
41. ಸತ್ಯಮಂಗಲಂ ಹುಲಿ ಸಂರಕ್ಷಿತ ತಾಣ (2013-14)  – ತಮಿಳುನಾಡು
42. ಮುಕಂದ್ರ ಹಿಲ್ಸ್ ಹುಲಿ ಸಂರಕ್ಷಿತ ತಾಣ(2013-14)  – ರಾಜಸ್ಥಾನ
43. ನವೇಗಾಂವ್ ಹುಲಿ ಸಂರಕ್ಷಿತ ತಾಣ (2013-14)  – ಮಹಾರಾಷ್ಟ್ರ
44. ನಾಗಾರ್ಜುನ ಸಾಗರ್ – ಶ್ರೀಶೈಲಂ ಹುಲಿ ಸಂರಕ್ಷಿತ ತಾಣ (1982-83) – ಆಂಧ್ರಪ್ರದೇಶ
45. ಅಮ್ರಾಬಾದ್ ಹುಲಿ ಸಂರಕ್ಷಿತ ತಾಣ (2014)  – ತೆಲಂಗಾಣ
46. ಪಿಲಿಭಿತ್ ಹುಲಿ ಸಂರಕ್ಷಿತ ತಾಣ (2014)  – ಉತ್ತರಪ್ರದೇಶ
47. ಬೋರ್ ಹುಲಿ ಸಂರಕ್ಷಿತ ತಾಣ (2014) ಮಹಾರಾಷ್ಟ್ರ
48. ರಾಜಾಜಿ ಹುಲಿ ಸಂರಕ್ಷಿತ ತಾಣ (2015)  – ಉತ್ತರಾಖಂಡ್
49. ಒರಾಂಗ್   ಹುಲಿ ಸಂರಕ್ಷಿತ ತಾಣ (2016)  – ಅಸ್ಸಾಂ
50. ಕಮ್ಲಾಂಗ್ ಹುಲಿ ಸಂರಕ್ಷಿತ ತಾಣ (2016)  – ಅರುಣಾಚಲ ಪ್ರದೇಶ
51 ಶ್ರೀವಿಲ್ಲಿಪುತೂರ್ – ಮೇಗಮಲೈ ಹುಲಿ ಸಂರಕ್ಷಿತ ತಾಣ (2021)  – ತಮಿಳುನಾಡು
52. ರಾಮಗಢ ವಿಶ್ದಾರಿ ಹುಲಿ ಸಂರಕ್ಷಿತ ತಾಣ (2021)  – ರಾಜಸ್ಥಾನ
53. ಗುರು ಘಾಸಿದಾಸ್ ರಾಷ್ಟ್ರೀಯ ಉದ್ಯಾನವನ ಮತ್ತು ತಮೋರ್ ಪಿಂಗ್ಲಾ ವನ್ಯಜೀವಿ ಅಭಯಾರಣ್ಯ (2022) –  ಛತ್ತೀಸ್‌ಗಢ
54. ವೀರಾಂಗಣ ದುರ್ಗಾವತಿ ವನ್ಯಜೀವಿಧಾಮ (2023) –  ಮಧ್ಯಪ್ರದೇಶ
55. ಧೋಲ್ಪುರ್ – ಕರೌಲಿ ಹುಲಿ ಸಂರಕ್ಷಿತ ಪ್ರದೇಶ (2023) –  ರಾಜಸ್ಥಾನ್
56. ಗುರು ಘಾಸಿದಾಸ್ – ಟಮೋರ್ ಪಿಂಗ್ಲಾ ಹುಲಿ ಸಂರಕ್ಷಿತ ಪ್ರದೇಶ (2024 ನವೆಂಬರ್ 18) –  ಛತ್ತಿಸಗಢ್
57. ರತಪಾನಿ ಹುಲಿ ಸಂರಕ್ಷಿತ ಪ್ರದೇಶ (2024 ಡಿಸೆಂಬರ್ 3)  – ಮಧ್ಯಪ್ರದೇಶ

ಮಾದರಿ ಪ್ರಶ್ನೆ

1. ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :
ಎ) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್‌ರವರು ಮಧ್ಯಪ್ರದೇಶ ರಾಜ್ಯದ ರತಪಾನಿ ಹುಲಿ ಸಂರಕ್ಷಿತ ಪ್ರದೇಶವನ್ನು ಭಾರತದ 57ನೇ ಹುಲಿ ಸಂರಕ್ಷಿತ ಪ್ರದೇಶವಾಗಿ 2024 ಡಿಸೆಂಬರ್ 3ರಂದು ಅಧಿಸೂಚಿಸಿರುವುದಾಗಿ ತಿಳಿಸಿದರು.ಇದು ಮಧ್ಯಪ್ರದೇಶದ 8ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಇದು ಆಂಧ್ರಪ್ರದೇಶ ರಾಜ್ಯದ ನಾಗಾರ್ಜುನಸಾಗರ್-ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶ ಮತ್ತು ಅಸ್ಸಾಂ ರಾಜ್ಯದ ಮಾನಸ ಹುಲಿ ಸಂರಕ್ಷಿತ ಪ್ರದೇಶದ ನಂತರ ಇದು ಭಾರತದ ಮೂರನೇ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
ಬಿ) ಛತ್ತೀಸ್‌ಗಢ ರಾಜ್ಯದ ಗುರು ಘಾಸಿದಾಸ್-ತಮೋರ್ ಪಿಂಗ್ಲಾ ಹುಲಿ ಸಂರಕ್ಷಿತ ಪ್ರದೇಶವನ್ನು ಭಾರತದ 56ನೇ ಹುಲಿ ಸಂರಕ್ಷಿತ ಪ್ರದೇಶವಾಗಿ 2024 ನವೆಂಬರ್ 18 ರಂದು ಅಧಿಸೂಚಿಸಲಾಗಿದೆ.
ಸಿ) ಗುರು ಘಾಸಿದಾಸ್-ತಮೋರ್ ಪಿಂಗ್ಲಾ ಹುಲಿ ಸಂರಕ್ಷಿತ ಪ್ರದೇಶ ಛತ್ತೀಸ್‌ಗಢ ರಾಜ್ಯದ 4ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
ಡಿ) ವಿಶ್ವ ಹುಲಿ ದಿನವನ್ನು ಜುಲೈ 29ರಂದು ಆಚರಿಸಲಾಗುತ್ತದೆ.
ಮೇಲ್ಕಂಡ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ.
1. ಒಂದು ಹೇಳಿಕೆ ಮಾತ್ರ ಸರಿಯಾಗಿದೆ.
2. ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ.
3. ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ.
4. ಎಲ್ಲಾ ಹೇಳಿಕೆಗಳು ಸರಿಯಾಗಿವೆ.
ಉತ್ತರ : 4. ಎಲ್ಲಾ ಹೇಳಿಕೆಗಳು ಸರಿಯಾಗಿವೆ.

Leave a Reply

Your email address will not be published. Required fields are marked *