2025ರ ಪದ್ಮ ಪ್ರಶಸ್ತಿಗಳು-
ಪದ್ಮವಿಭೂಷಣ ಪ್ರಶಸ್ತಿ – 2025 ಜನವರಿ 26
  • ಪದ್ಮವಿಭೂಷಣ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
  • ಪದ್ಮವಿಭೂಷಣ ಪ್ರಶಸ್ತಿ ಭಾರತದ 2ನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾಗಿದೆ.
  • 2025ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು 7 ಮಹಾನಿಯರಿಗೆ ನೀಡಲಾಗಿದೆ.
2025ರ ಪದ್ಮವಿಭೂಷಣ ಪ್ರಶಸ್ತಿ ಪಡೆದವರು-
  1. ಲಕ್ಷ್ಮೀನಾರಾಯಣ ಸುಬ್ರಮಣಿಯಂ (ವಯೊಲಿನ್ ವಾದಕರು) – ಕಲೆ  – ಕರ್ನಾಟಕ
  2. ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ)  – ಸಾಹಿತ್ಯ – ಶಿಕ್ಷಣ –  ಕೇರಳ
  3. ಒಸಾಮು ಸುಜುಕಿ (ಮರಣೋತ್ತರ) –  ವ್ಯಾಪಾರ – ಕೈಗಾರಿಕೆ  – ಜಪಾನ್
  4. ನಿವೃತ್ತ ನ್ಯಾಯಮೂರ್ತಿ ಜೆ.ಎಸ್ ಖೆಹರ್ – ಸಾರ್ವಜನಿಕ ವ್ಯವಹಾರ  -ಚಂಡೀಗಡ್
  5. ದುವ್ವೂರು ನಾಗೇಶ್ವರ ರೆಡ್ಡಿ  – ವೈದ್ಯಕೀಯ  – ತೆಲಂಗಾಣ
  6. ಕುಮುದಿನಿ ರಜನೀಕಾಂತ್ ಲಖಿಯಾ  – ಕಲೆ – ಗುಜರಾತ್
  7. ಶಾರದಾ ಸಿನ್ಹಾ (ಮರಣೋತ್ತರ) –  ಕಲೆ  – ಬಿಹಾರ
ಪದ್ಮಭೂಷಣ ಪ್ರಶಸ್ತಿ – 2025 ಜನವರಿ 26
  • ಪದ್ಮಭೂಷಣ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
  • ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ – ಪದ್ಮಭೂಷಣ ಪ್ರಶಸ್ತಿ
  • 2025ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು 19 ಮಹಾನಿಯರಿಗೆ ನೀಡಲಾಗಿದೆ.
2025ರ ಪದ್ಮಭೂಷಣ ಪ್ರಶಸ್ತಿ ಪಡೆದವರು
  1. ಅರಕಲಗೂಡು ಸೂರ್ಯ ಪ್ರಕಾಶ್  – ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ  – ಕರ್ನಾಟಕ
  2. ಅನಂತನಾಗ್  – ಕಲೆ  – ಕರ್ನಾಟಕ
  3. ಪಿ.ಆರ್.ಶ್ರೀಜೇಶ್ – (ಹಾಕಿ ಆಟಗಾರ) –  ಕ್ರೀಡೆ ಕೇರಳ
  4. ಬಿಬೇಕ್ ದೇಬ್‌ರಾಯ್ (ಮರಣೋತ್ತರ)  – ಸಾಹಿತ್ಯ ಮತ್ತು ಶಿಕ್ಷಣ  – ದೆಹಲಿ
  5. ಜತಿನ್ ಗೋಸ್ವಾಮಿ  – ಕಲೆ  – ಅಸ್ಸಾಂ
  6. ಜೋಸ್ ಚಾಕೊ ಪೆರಿಯಪ್ಪುರಂ  – ವೈದ್ಯಕೀಯ  – ಕೇರಳ
  7. ಕೈಲಾಶನಾಥ್ ದೀಕ್ಷಿತ್  – ಇತರ – ಪುರಾತತ್ವ  – ದೆಹಲಿ
  8. ಮನೋಹರ್ ಜೋಷಿ (ಮರಣೋತ್ತರ)  – ಸಾರ್ವಜನಿಕ ವ್ಯವಹಾರ  – ಮಹಾರಾಷ್ಟ್ರ
  9. ನಲ್ಲಿ ಕುಪ್ಪುಸ್ವಾಮಿ ಚೆಟ್ಟಿ  – ವ್ಯಾಪಾರ ಮತ್ತು ಕೈಗಾರಿಕೆ –  ತಮಿಳುನಾಡು
  10. ನಂದಮೂರಿ ಬಾಲಕೃಷ್ಣ  – ಕಲೆ  – ಆಂಧ್ರಪ್ರದೇಶ
  11. ಪಂಕಜ್ ಪಟೇಲ್  – ವ್ಯಾಪಾರ ಮತ್ತು ಕೈಗಾರಿಕೆ  – ಗುಜರಾತ್
  12. ಪಂಕಜ್ ಉಧಾಸ್ (ಮರಣೋತ್ತರ) –  ಕಲೆ  – ಮಹಾರಾಷ್ಟ್ರ
  13. ರಾಮಬಹಾದ್ದೂರ್ ರಾಯ್  – ಸಾಹಿತ್ಯ ಮತ್ತು ಶಿಕ್ಷಣ ಪತ್ರಿಕೋದ್ಯಮ  – ಉತ್ತರ ಪ್ರದೇಶ
  14. ಸಾಧ್ವಿ ರಿತಂಬರಾ  – ಸಾಮಾಜಿಕ ಕೆಲಸ  – ಉತ್ತರ ಪ್ರದೇಶ
  15. ಎಸ್. ಅಜಿತ್ ಕುಮಾರ್ –  ಕಲೆ  – ತಮಿಳುನಾಡು
  16. ಶೇಖರ್ ಕಪೂರ್  – ಕಲೆ  – ಮಹಾರಾಷ್ಟ್ರ
  17. ಶೋಭನಾ ಚಂದ್ರಕುಮಾರ್  – ಕಲೆ  – ತಮಿಳುನಾಡು
  18. ಸುಶೀಲ್ ಕುಮಾರ್ ಮೋದಿ (ಮರಣೋತ್ತರ)  – ಸಾರ್ವಜನಿಕ ವ್ಯವಹಾರ  – ಬಿಹಾರ
  19. ವಿನೋದ್ ಧಾಮ್  – ವಿಜ್ಞಾನ ಮತ್ತು ಎಂಜಿನಿಯರಿಂಗ್ –  ಅಮೆರಿಕ
ಪದ್ಮಶ್ರೀ ಪ್ರಶಸ್ತಿ – 2025 ಜನವರಿ 26
  • ಪದ್ಮಶ್ರೀ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
  • ಪದ್ಮಶ್ರೀ ಪ್ರಶಸ್ತಿ ಭಾರತದ 4ನೇ ಅತಿ ದೊಡ್ಡ ನಾಗರೀಕ ಪ್ರಶಸ್ತಿಯಾಗಿದೆ.
  • 2025ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು 113 ಮಹಾನಿಯರಿಗೆ ನೀಡಲಾಗಿದೆ.

2025ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕನ್ನಡಿಗರು –

  1. ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೇಕ್ಯಾತರ – ಕಲೆ (ತೊಗಲು ಬೊಂಬೆಯಾಟ)
  2. ಡಾ|| ವೆಂಕಪ್ಪ ಅಂಬಾಜಿ ಸುಗತೇಕರ  – ಕಲೆ (ಗೋಂಧಳಿ ಕಲಾವಿದ)
  3. ಡಾ|| ವಿಜಯಲಕ್ಷ್ಮಿ ದೇಶಮಾನೆ  – ವೈದ್ಯಕೀಯ (ಕ್ಯಾನ್ಸರ್ ತಜ್ಞೆ)
  4. ಕೆ.ಎಚ್.ರಘು  – ಕಲೆ
  5. ಪ್ರಶಾಂತ್ ಪ್ರಕಾಶ್ –  ಕೈಗಾರಿಕೆ
  6. ರಿಕ್ಕಿ ಗ್ಯಾನ್ ಕೇಜ್  – ಕಲೆ
ಪದ್ಮ ಪ್ರಶಸ್ತಿ ಪಡೆದವರ ವಿಶೇಷತೆಗಳು –

1. ಲಕ್ಷ್ಮೀನಾರಾಯಣ ಸುಬ್ರಮಣಿಯಂ –

ಇವರು ಪ್ರಸಿದ್ಧ ವಯೊಲಿನ್ (ಪಿಟೀಲು) ವಾದಕರು. ಇವರು ಮೀರಾ ನಾಯರ್ ನಿರ್ದೇಶನದ ಸಲಾಂ ಬಾಂಬೆ (1988), ಮಿಸ್ಸಿಸಿಪ್ಪಿ ಮಸಾಲಾ (1991) ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. 1973ರಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರಿಗೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ, 2001ರಲ್ಲಿ ಪದ್ಮಭೂಷಣ ಪ್ರಶಸ್ತಿ ಮತ್ತು 2025 ಪದ್ಮವಿಭೂಷಣ ಪ್ರಶಸ್ತಿ ಲಭಿಸಿವೆ.

 

2. ಅರಕಲಗೂಡು ಸೂರ್ಯ ಪ್ರಕಾಶ್ –

ಇವರು ಹಾಸನ ಜಿಲ್ಲೆಯ ಅರಕಲಗೂಡು ಮೂಲದವರು. ಹಿರಿಯ ಪತ್ರಕರ್ತರಾಗಿರುವ ಇವರು ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಇವರು ಇಂಡಿಯನ್ ಎಕ್ಸ್ಪ್ರೆಸ್, ದಿ ಪಯನಿಯರ್, ಈ ನಾಡು ಮತ್ತು ಜಿ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದಾರೆ. ಇವರು ಡೆಮಾಕ್ರಸಿ, ಪಾಲಿಟಿಕ್ಸ್ ಆ್ಯಂಡ್ ಗವರ್ನೆನ್ಸ್, ಪಬ್ಲಿಕ್ ಮನಿ ಆ್ಯಂಡ್ ಪ್ರೈವೇಟ್ಅಜೆಂಡಾ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಇವರಿಗೆ 2025ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

3. ಅನಂತನಾಗ್ –

ಪ್ರಸಿದ್ಧ ನಟರಾದ ಇವರು ಕನ್ನಡ, ಮಲಯಾಳಂ, ತೆಲುಗು, ಹಿಂದಿ , ಇಂಗ್ಲಿಷ್ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. (200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ) ಇವರಿಗೆ 2025ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

4.ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ –

ಇವರು ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದವರು. ರಾಮಾಯಣ, ಮಹಾಭಾರತ ಸೇರಿದಂತೆ ಇತರ ಪೌರಾಣಿಕ ಕಥೆಗಳ ಆಧಾರಿತ ತೊಗಲು ಗೊಂಬೆಯಾಟ ಪ್ರದರ್ಶಿಸುವಲ್ಲಿ ಭೀಮವ್ವ ಕುಂಟಬದವರು ಪ್ರಸಿದ್ಧರು. ಇವರು ಜಪಾನ್, ಜರ್ಮನಿ, ಅಮೆರಿಕ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ ಸೇರಿದಂತೆ 12 ದೇಶಗಳಲ್ಲಿ ತೊಗಲು ಗೊಂಬೆಯಾಟ ಪ್ರದರ್ಶಿಸಿ, ಭಾರತದ ಸಾಂಪ್ರದಾಯಿಕ ಕಲೆಯ ಬಗ್ಗೆ ಇಡಿ ವಿಶ್ವದ ಗಮನ ಸೆಳೆದಿದ್ದಾರೆ. ಇವರಿಗೆ 2025ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.

5. ಡಾ|| ವೆಂಕಪ್ಪ ಅಂಬಾಜಿ ಸುಗತೇಕರ –

ಇವರಿಗೆ 2022ರಲ್ಲಿ ಕರ್ನಾಟಕ ಜನಪದ ವಿಶ್ವವಿದ್ಯಾಲಯ ಇವರ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಮೂಲತಃ ಬಾಗಲಕೋಟೆ ಜಿಲ್ಲೆಯವರು. ಇವರಿಗೆ 2025ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.

6. ಡಾ|| ವಿಜಯಲಕ್ಷ್ಮಿ ದೇಶಮಾನೆ –

ಡಾ|| ವಿಜಯಲಕ್ಷ್ಮಿ ದೇಶಮಾನೆಯವರು ಮೂಲತಃ ಕಲಬುರಗಿಯವರು. ಇವರು ಪ್ರಸಿದ್ಧ ಕ್ಯಾನ್ಸರ್ ತಜ್ಞೆರು. ಇವರಿಗೆ 2025ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.

7. ಕೆ.ಎಚ್. ರಘು –
ಇವರು ಆಕ್ಸಿಡೆಂಟ್, ಮಸಣದ ಹೂವು ಸೇರಿದಂತೆ ಅನೇಕ ಸಿನಿಮಾಗಳಿಗೆ ಸ್ಟಂಟ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ
ಮಾರ್ಷಲ್ ಆರ್ಟ್ಸ್ನ್ನು ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಮೂಲತಃ ಹಾಸನ ಜಿಲ್ಲೆಯವರು. ಇವರಿಗೆ 2025ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.

8. ಪ್ರಶಾಂತ್ ಪ್ರಕಾಶ್ –

ಮೂಲತಃ ಬೆಂಗಳೂರಿನವರಾದ ಇವರು ಸಾಫ್ಟ್ವೇರ್ ಇಂಜಿನಿಯರ್ ಇವರಿಗೆ 2025ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.

9. ರಿಕ್ಕಿ ಗ್ಯಾನ್ ಕೇಜ್ –

ಪ್ರಪಂಚ ಕಂಡ ಪ್ರಮುಖ ಸಂಗೀತ ನಿರ್ದೇಶಕರಲ್ಲಿ ರಿಕ್ಕಿ ಗ್ಯಾನ್ ಕೇಜ್‌ರವರು ಒಬ್ಬರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ನೆಲ್ಲಿಸಿದ್ದಾರೆ.
ಇವರಿಗೆ ಸಂಗೀತ ಕ್ಷೇತ್ರದಲ್ಲಿ ನೀಡುವ ಪ್ರಸಿದ್ಧ ಗ್ರ್ಯಾಮಿ ಪ್ರಶಸ್ತಿ ಮೂರು ಬಾರಿ ಲಭಿಸಿದೆ. ಇವರಿಗೆ 2025ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.

Leave a Reply

Your email address will not be published. Required fields are marked *