Dhronacharya Academy

ಜ್ಞಾನಪೀಠ ಪ್ರಶಸ್ತಿ – 2024
ಭಾರತೀಯ ಜ್ಞಾನಪೀಠ ಟ್ರಸ್ಟ್ –
ಇದರ ಸ್ಥಾಪಕರು – ಸಾಹು ಶಾಂತಿ ಪ್ರಸಾದ್ ಜೈನ್ ಮತ್ತು ಅವರ ಪತ್ನಿ ರಮಾ ಜೈನ್
ಇದು ಸ್ಥಾಪನೆಯಾದ ವರ್ಷ – 1944 ಫೆಬ್ರವರಿ 18
ಇದರ ಕೇಂದ್ರ ಕಚೇರಿ ಇರುವುದು – ನವದೆಹಲಿ
ಇದು ಪ್ರತಿಷ್ಠಿತ ಸಾಹಿತ್ಯ ಮತ್ತು ಸಂಶೋಧನಾ ಸಂಸ್ಥೆಯಾಗಿದೆ.

 

59ನೇ ಜ್ಞಾನಪೀಠ ಪ್ರಶಸ್ತಿ – 2024
ಜ್ಞಾನಪೀಠ ಪ್ರಶಸ್ತಿ ಸ್ಥಾಪನೆಯಾದ ವರ್ಷ- 1961
ಜ್ಞಾನಪೀಠ ಪ್ರಶಸ್ತಿಯನ್ನು ಮೊದಲ ಬಾರಿಗೆ ನೀಡಿದ ವರ್ಷ- 1965
ಜ್ಞಾನಪೀಠ ಪ್ರಶಸ್ತಿಯು 17 ಲಕ್ಷ ರೂಪಾಯಿ ನಗದು, ವಾಗ್ದೇವಿ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಜ್ಞಾನಪೀಠ ಪ್ರಶಸ್ತಿ ಭಾರತದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೀಡುವ ಅತಿ ದೊಡ್ಡ ಪ್ರಶಸ್ತಿಯಾಗಿದೆ.
ಜ್ಞಾನಪೀಠ ಪ್ರಶಸ್ತಿ ಮೊದಲು ಪಡೆದವರು – ಜಿ. ಶಂಕರ್ ಕುರೂಪ್ (ಮಲಯಾಳಂ ಭಾಷೆ)
ಜಿ. ಶಂಕರ್ ಕುರೂಪ್‌ರವರಿಗೆ ಒಡಕ್ಕುಳಲ್ (ಬಿದಿರಿನ ಕೊಳಲು) ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ.
ಜ್ಞಾನಪೀಠ ಪ್ರಶಸ್ತಿ ಮೊದಲು ಪಡೆದ ಮಹಿಳೆ- “ಆಶಾಪೂರ್ಣದೇವಿ” (1976, ಬಂಗಾಳಿ ಭಾಷೆ, 12ನೇ ಜ್ಞಾನಪೀಠ ಪ್ರಶಸ್ತಿ)
ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ – ಹಿಂದಿ (12 ಪ್ರಶಸ್ತಿಗಳು)
ಇದುವರೆಗೂ ಕನ್ನಡ ಭಾಷೆಗೆ ದೊರೆತಿರುವ ಒಟ್ಟು ಜ್ಞಾನಪೀಠ ಪ್ರಶಸ್ತಿಗಳು – 8.
ಇದುವರೆಗೂ ಒಟ್ಟು 65 ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.
2018ರ 54ನೇ ಜ್ಞಾನಪೀಠ ಪ್ರಶಸ್ತಿ ಪಡೆದವರು – ಅಮಿತಾವ್ ಘೋಷ್ (ಇಂಗ್ಲಿಷ್ ಭಾಷೆ)
2021ರ 56ನೇ ಜ್ಞಾನಪೀಠ ಪ್ರಶಸ್ತಿ ಪಡೆದವರು – ನೀಲಮಣಿ ಪೂಕನ್ (ಅಸ್ಸಾಮಿ ಭಾಷೆ)
2022ರ 57ನೇ ಜ್ಞಾನಪೀಠ ಪ್ರಶಸ್ತಿ ಪಡೆದವರು – ದಾಮೋದರ್ ಮೌಜೋ (ಕೊಂಕಣಿ ಸಾಹಿತಿ)
2023ರ 58ನೇ ಜ್ಞಾನಪೀಠ ಪ್ರಶಸ್ತಿ ಪಡೆದವರು – ಪ್ರಸಿದ್ಧ ಚಿತ್ರ ಸಾಹಿತಿ, ಉರ್ದು ಕವಿ ಸಂಪೂರಣ್ ಸಿಂಗ್ ಕಾಲ್ರಾ (ಗುಲ್ಜಾರ್) ಮತ್ತು ಸಂಸ್ಕೃತ ವಿದ್ವಾಂಸರಾದ ಜಗದ್ಗುರು ರಾಮ ಭದ್ರಾಚಾರ್ಯ
2024ರ 59ನೇ ಜ್ಞಾನಪೀಠ ಪ್ರಶಸ್ತಿ ಪಡೆದವರು –
ವಿನೋದ್ ಕುಮಾರ್ ಶುಕ್ಲಾ

ವಿನೋದ್ ಕುಮಾರ್ ಶುಕ್ಲಾ –
ಛತ್ತೀಸ್‌ಗಢ ರಾಜ್ಯದ ಪ್ರಸಿದ್ಧ ಕವಿ, ಸಣ್ಣ ಕಥೆಗಾರ ಮತ್ತು ಪ್ರಬಂಧಕಾರರಾದ 88 ವರ್ಷದ ವಿನೋದ್ ಕುಮಾರ್ ಶುಕ್ಲಾರವರು 59ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿಯು ಛತ್ತೀಸ್‌ಗಢ ರಾಜ್ಯದವರಿಗೆ ಇದೇ ಮೊದಲ ಬಾರಿಗೆ ಲಭಿಸಿದೆ. “ದಿವಾರ್ ಮೇ ಏಕ್ ಖಿಡಿಕಿ ರಹತೀ ಥಿ” ಕೃತಿಗೆ ವಿನೋದ್ ಕುಮಾರ್ ಶುಕ್ಲಾರವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. “ನೌಕರ್ ಕಿ ಕಮೀಜ್” (1979) ಇವರ ಪ್ರಮುಖ ಕೃತಿಯಾಗಿದೆ. ಈ ಕೃತಿಯನ್ನು ಇಟ್ಟುಕೊಂಡು ಇದೇ ಹೆಸರಿನ ಸಿನಿಮಾವನ್ನು ಮೌನಿ ಕೌಲ್‌ರವರು ನಿರ್ದೇಶಿಸಿದ್ದಾರೆ. “ಸಬ್ ಕುಚ್ ಹೋನಾ ಬಚಾ ರಹೇಗಾ” (1992) ಇವರ ಪ್ರಮುಖ ಸಂಕಲನವಾಗಿದೆ.

 

2024ರ 59ನೇ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು – ಸಾಹಿತಿ ಪ್ರತಿಭಾರೈ (ಒಡಿಶಾ) (2011ರ 47ನೇ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ)

ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿ – 2025
ಅಧ್ಯಕ್ಷರು – ಪ್ರತಿಭಾರೈ
ಸದಸ್ಯರು – ಮಾಧವ್ ಕೌಶಿಕ್, ದಾಮೋದರ್ ಮೌಝೊ, ಪ್ರಭಾ ವರ್ಮಾ, ಅನಾಮಿಕಾ, ಎ.ಕೃಷ್ಣರಾವ್, ಪ್ರಫುಲ್ ಶಿಲೇದರ್, ಜಾನಕಿ ಪ್ರಸಾದ್ ಶರ್ಮಾ ಮತ್ತು ಜ್ಞಾನಪೀಠ ನಿರ್ದೇಶಕರಾದ ಮಧುಸೂದನ್ ಆನಂದ್ ಸಮಿತಿಯ ಇತರ ಸದಸ್ಯರು.

 

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರು – 8

  1. ಕುವೆಂಪು – ಶ್ರೀ ರಾಮಾಯಣ ದರ್ಶನಂ –  1967
  2. ದ.ರಾ. ಬೇಂದ್ರೆ – ನಾಕುತಂತಿ  – 1973
  3. ಕೆ. ಶಿವರಾಮ್ ಕಾರಂತ್ – ಮೂಕಜ್ಜಿಯ
    ಕನಸುಗಳು  – 1977
  4. ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಚಿಕ್ಕವೀರ
    ರಾಜೇಂದ್ರ  – 1983
  5. ವಿ.ಕೃ.ಗೋಕಾಕ್ – ಭಾರತ ಸಿಂಧೂ
    ರಶ್ಮಿ – 1990
  6. ಯು. ಆರ್. ಅನಂತಮೂರ್ತಿ –  ಸಮಗ್ರ ಸಾಹಿತ್ಯ – 1994
  7. ಗಿರೀಶ್ ಕಾರ್ನಾಡ್ – ಸಮಗ್ರ ಸಾಹಿತ್ಯ –  1998
  8. ಚಂದ್ರಶೇಖರ ಕಂಬಾರ್ – ಸಮಗ್ರ ಸಾಹಿತ್ಯ – 2010