Dhronacharya Academy

ಪಂಬನ್ ಸೇತುವೆ ಲೋಕಾರ್ಪಣೆ – 2025 ಏಪ್ರಿಲ್ 6

ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಲಾಗಿರುವ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಇರುವ ಪಂಬನ್ ಸೇತುವೆಯನ್ನು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 2025 ಏಪ್ರಿಲ್ 6ರಂದು ಉದ್ಘಾಟಿಸಿದರು.

2019ರಲ್ಲಿ ಮಾನ್ಯ ಪ್ರಧಾನಮಂತ್ರಿಯವರಿಂದ ಶಂಕು ಸ್ಥಾಪನೆ

ಪಂಬನ್ ಸೇತುವೆ ರಾಮೇಶ್ವರಂ-ತಾಂಬರಂ  ನಡುವೆ ಸಂಪರ್ಕ ಕಲ್ಪಿಸುತ್ತದೆ.

ಪಂಬನ್ ಸೇತುವೆ ಭಾರತದ ಮೊದಲ ಲಿಫ್ಟ್ ಸೇತುವೆಯೂ (ಮೇಲೆತ್ತಲಾಗುವ ಸೇತುವೆ) ಹೌದು

ಲಂಬ-ಲಿಫ್ಟ್ ರೈಲ್ವೆ ಸಮುದ್ರ ಸೇತುವೆ –

ಪಂಬನ್ ಸೇತುವೆ ವಿಶೇಷತೆಗಳು –

  1. ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಇರುವ ಸಮುದ್ರ ಸೇತುವೆಯಾಗಿದ್ದು, ಇದನ್ನು ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್‌ರವರು ನಿರ್ಮಿಸಿದ್ದಾರೆ.
  2. ಪಂಬನ್ ಸೇತುವೆಯ ಉದ್ದ 2.08 ಕಿ.ಮೀ ಇದ್ದು, 99 ಸ್ಟ್ಯಾನ್ ಮತ್ತು ಒಂದು ವರ್ಟಿಕಲ್ ಲಿಫ್ಟ್ ಹೊಂದಿದೆ.
  3. ಪಂಬನ್ ಸೇತುವೆಯಲ್ಲಿ 72.5 ಮೀಟರ್ ಉದ್ದದ ವರ್ಟಿಕಲ್ ಲಿಫ್ಟ್ ಇದ್ದು, ಇದು 17 ಮೀ. ಎತ್ತರಕ್ಕೆ ಏರಬಹುದು. ಇದು ದೊಡ್ಡ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ.
  4. ಪಂಬನ್ ಸೇತುವೆ ನಿರ್ಮಾಣದಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಬಳಸಲಾಗಿದೆ. ಪಾಲಿಸಿಲೋಕ್ಸೇನ್ ಲೇಪನ ಮಾಡಲಾಗಿದೆ. ಇದರಿಂದ ಸಮುದ್ರದ ವಾತಾವರಣದಲ್ಲೂ ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಕಡಿಮೆ ನಿರ್ವಹಣೆ ಸಾಕಾಗುತ್ತದೆ.
  5. ಈ ಮೊದಲಿದ್ದ ಸೇತುವೆಯಲ್ಲಿ ಹಡುಗುಗಳಿಗೆ ದಾರಿ ಮಾಡಿಕೊಡಲು 25-30 ನಿಮಿಷ ಬೇಕಾಗುತ್ತಿತ್ತು. ಹೊಸ ಸೇತುವೆಯಲ್ಲಿ ಕೇವಲ 5 ನಿಮಿಷದಲ್ಲಿ ಲಿಫ್ಟ್ ಮೇಲೆತ್ತಬಹುದು.
  6. ಪಂಬನ್ ಸೇತುವೆ 550 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ.