Description
ಎಲ್ಲಾ ಜೀವ ಜಂತುಗಳಲ್ಲಿ ಶ್ವಾನದಷ್ಟು ನಂಬುಗೆಯ ಮತ್ತೊಂದು ಜೀವಿ ಇರಲಿಕ್ಕಿಲ್ಲ. ಕಾವಲುಗಾರನಾಗಿ ಒಡನಾಡಿಯಾಗಿ ಕೆಲವು ಕೆಲಸಗಳಲ್ಲಿ ಸಹದ್ಯೋಗಿ ಮಿತ್ರನಾಗಿ ಹಲವಾರು ಕ್ಷೇತ್ರಗಳಲ್ಲಿ ಶ್ವಾನಗಳು ತಮ್ಮದೆ ಆದ ಛಾಪು ಮೂಡಿಸಿದೆ.
ನಾಯಿ ಏಕೆ ಸಾಕಬೇಕು?
ಮಾನವ ಅನಾದಿ ಕಾಲದಿಂದಲೂ ರಕ್ಷಣೆ, ಜಾನುವಾರು ಕಾವಲು, ಹಿಮಬಂಡಿಗಳನ್ನು ಎಳೆಯಲು, ಬೇಟೆ ಉದ್ದೇಶಕ್ಕಾಗಿ ನಾಯಿಗಳನ್ನು ಸಾಕುತ್ತಾ ಬಂದಿದ್ದಾನೆ. ನಾಯಿಗಳನ್ನು ಸಾಕುವುದರಿಂದ ನಮಗೆ ಹಲವಾರು ಲಾಭಗಳಿವೆ.
ಕಳ್ಳತನ ಮಾತ್ರವಲ್ಲದೆ ಮನೆಯಲ್ಲಿನ ನಾಯಿಗಳು ಹುಲಿ, ಚಿರತೆಯಂತಹ ಕ್ರೂರ ಪ್ರಾಣಿಗಳು ಹಾವು ಚೇಳಿನಂತಹ ಕ್ರಿಮಿಕೀಟಗಳಿಂದ ಪ್ರಕೃತಿ ವಿಕೋಪಗಳಿಂದ ಕುಟುಂಬ ಸದಸ್ಯರನ್ನು ಕಾಪಾಡಿದ ಬಗ್ಗೆ ಹಾಗಾಗ ವರದಿ ಆಗುತ್ತಲೆ ಇರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಮನೆಯಲ್ಲಿ ಒಂದು ನಾಯಿ ಇದ್ದರೇ, ಮನೆ ಕಳ್ಳತನವಾಗುವ, ಅಪರಿಚಿತರ ಅತಿಕ್ರಮ ಪ್ರವೇಶದಂತಹ ಸಂಭಾವ್ಯ ಸಾಧ್ಯತೆಯನ್ನು ತಪ್ಪಿಸಬಹುದಾಗಿದೆ.






